Uncategorized

ಚಿಂತನ.

೧. ಜೀವನದಲ್ಲಿ ಅನುಭವಗಳು ಗುರುವಾಗುತ್ತವೆ. ಹಾಗೆಯೇ ಪ್ರಕೃತಿ ಜೊತೆಗಿನ ಒಡನಾಟ, ಅದರಲ್ಲಿರುವ ಪ್ರತಿ ಕಣ,ಕಣವೂ ನಮಗೆ ಗುರುವೇ ಆಗುತ್ತವೆ. ಜೀವನಕ್ಕೊಂದು ಅರ್ಥ ಕೊಡುತ್ತವೆ. ಪರಿಸರದಿಂದ ಕಲಿಯಬೇಕಾದ ಪಾಠ-- ಹೂ ಗಳಿಂದ ನಿತ್ಯ ನಗುವುದನ್ನು,ಮರದ ಕೊಂಬೆಗಳಿಂದ ತಲೆ ಬಾಗುವುದನ್ನು ಅಂದರೆ ವಿಧೇಯತೆಯನ್ನು,ನಾಯಿಯಿಂದ ನಿಯತ್ತನ್ನು, ಕಾಗೆಗಳಿಂದ ಒಗ್ಗಟ್ಟನ್ನು,ಹಂಚಿ ತಿನ್ನುವುದನ್ನು,ಮರ-ಬಳ್ಳಿ ನೋಡಿ ಒಬ್ಬರನ್ನೊಬ್ಬರು ಆಶ್ರಯಿಸುವುದನ್ನು, ದಿನ ಬೆಳಗಿಸುವ ಸೂರ್ಯನಿಂದ ಆಲಸ್ಯವನ್ನು,ಅಜ್ಞಾನವೆಂಬ ಅಂಧಕಾರವನ್ನು ಓಡಿಸುವುದನ್ನು, ಭುಮಿತಾಯಿಯಿಂದ ಕ್ಷಮೆ,ನಿಸ್ವಾರ್ಥತೆಯನ್ನು ಕಲಿಯ ಬಹುದು. ೨. ದೃಶ್ಯ ಮಾಧ್ಯಮಕ್ಕೆ ಜನರನ್ನು ನಂಬಿಸುವ ಅದ್ಭುತವಾದ ಶಕ್ತಿ ಇದೆ. ದೃಶ್ಯ… Continue reading ಚಿಂತನ.

Uncategorized

ಹೆಣ್ಣು.

೧. ನೋಡುವ ಕಣ್ಣುಗಳಿಗೂ ಸಂಸ್ಕಾರ ಬೇಕು. ಹೆಣ್ಣನ್ನು ಹೆಣ್ಣಾಗಿ ನೋಡುವುದು ಪ್ರಕೃತಿ. ಹೆಣ್ಣನ್ನು ಮಾಯೆಯಾಗಿ ನೋಡುವುದು ವಿಕೃತಿ. ಹೆಣ್ಣನ್ನು ತಾಯಿಯ ಭಾವದಿಂದ ನೋಡುವುದು ಸಂಸ್ಕೃತಿ. ಹುಟ್ಟಿದ ಮನೆಗೆ ಕೀರ್ತಿಯನ್ನೂ, ಕೊಟ್ಟ ಮನೆಗೆ ಬೆಳಕನ್ನೂ ತರುವಾಕೆ ಹೆಣ್ಣು. ಶಿಶುವಿನಿಂದ ಶವವಾಗುವ ತನಕ ಎಲ್ಲ ರೀತಿಯ ಶೋಷಣೆಗೆ ಒಳಗಾಗುವವಳು ಹೆಣ್ಣು. ತುಳಿದಷ್ಟೂ ಮೇಲೇಳುವ ಅದಮ್ಯ ಶಕ್ತಿ ಆಕೆಗಿದೆ. ಹೆಣ್ಣು ಜೀವದಾಯಿನಿ ಮಾತ್ರವಲ್ಲ ಜೀವನ್ಮುಖಿಯೂ ಹೌದು. ದೇವಿಯಾಗಿ, ಮಣ್ಣಿನ-ಕಲ್ಲಿನ ಮೂರ್ತಿಯಾಗಿ ಮಾತನಾಡದೆ ಮೌನವಾಗಿದ್ದಾಗ, ಪೂಜಿಸುವಾಗ ಅದೆಷ್ಟು ಪ್ರೀತಿ-ಭಕ್ತಿ ! ಅದೇ ರಕ್ತ-ಮಾಂಸಗಳ… Continue reading ಹೆಣ್ಣು.

Uncategorized

ಭಾರತ ಪರಿಚಯ.

೧. ಭಾರತದ ರಾಷ್ಟ್ರ ಗೀತೆಯನ್ನು ಪ್ರಥಮ ಬಾರಿ ಹಾಡಿದ ಸ್ಥಳ,ವರ್ಷ ಯಾವುದು ? -೧೯೧೧,ಕಲ್ಕತ್ತಾ (ಕೋಲ್ಕತ್ತ )ಕಾಂಗ್ರೆಸ್ಸ್. ೨. ಗಾಂಧೀಜಿ ಪ್ರಥಮ ಬಾರಿಗೆ ಸತ್ಯಾಗ್ರಹವನ್ನು ಪ್ರಯೋಗಾರ್ಥವಾಗಿ ಆರಂಭಿಸಿದ್ದೆಲ್ಲಿ ? --ಚಂಪಾರಣ್. ೩. ಗಂಗೆಯನ್ನು ಉತ್ತರದಿಂದ ದಕ್ಷಿಣಕ್ಕೆ ತಂದ ಚೋಳ ದೊರೆ ಯಾರು ? --ರಾಜೇಂದ್ರ ಚೋಳನ್. ೪. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೆಂಡಿನ ಪ್ರಧಾನ ಮಂತ್ರಿ ಯಾರಾಗಿದ್ದರು? --ಲಾರ್ಡ್ ಅಟ್ಲಿ. ೫. ಕುಶಾನರಲ್ಲಿ ಅತ್ಯಂತ ಪ್ರಸಿದ್ಧ ದೊರೆ ಯಾರು? --ಕನಿಷ್ಕ. ೬. ಭಾರತದ ಮೇಲೆ ೧೭ ಬಾರಿ… Continue reading ಭಾರತ ಪರಿಚಯ.

Uncategorized

ಕನ್ನಡ ಸೌರಭ.

ಸುಭಾಷಿತಗಳು. ೧. ಸ್ವರ್ಗಕ್ಕೆ ಹೋಗಲು ಬಯಸುವುದಕ್ಕಿಂತ ಇದ್ದಲ್ಲೇ ಸ್ವರ್ಗ ಸೃಷ್ಟಿಸಿ ಕೊಳ್ಳಲು ಯತ್ನಿಸಬೇಕು. ೨. ಯಾರನ್ನೇ ಆದರೂ ಪರೀಕ್ಷಿಸದೆ ನಂಬ ಬಾರದು. ನಂಬಿದ ಮೇಲೆ ಪರೀಕ್ಷಿಸ ಬಾರದು. ೩. ನಮ್ಮನ್ನು ಪ್ರತಿ ಕ್ಷಣವೂ ಸಂತಸದಲ್ಲಿ ಇರಿಸ ಬಹುದಾದ ಏಕೈಕ ವ್ಯಕ್ತಿ ಅಂದರೆ ಅದು ನಾವೇ. ೪. ಈ ಬದುಕೆನ್ನುವುದು ಆಕಸ್ಮಿಕ ಘಟನೆಗಳ ಸರಣಿ. ಪಯಣ ಸುಗಮವಾಗಲು ಬದಲಾವಣೆಗೆ ಸದಾ ಸಿದ್ಧರಾಗಿ. ೫. ಮುಗ್ಧತೆ ಮತ್ತು ಸೌಂದರ್ಯದ ನಿಜ ಶತ್ರು ವೆಂದರೆ ಸಮಯವೊಂದೇ. ೬. ಈ ಪ್ರಪಂಚ ಒಂದು… Continue reading ಕನ್ನಡ ಸೌರಭ.