Uncategorized

ಗಣೇಶ ಚತುರ್ಥಿ.

12031508_1018014951563294_8646551928949477278_o

ಭಾರತೀಯ ಸಂಸ್ಕೃತಿಯಲ್ಲಿ ಪ್ರಧಾನವಾದ ಭೂಮಿ,ಕೃಷಿ ,
ಪ್ರಕೃತಿಯನ್ನು ಪ್ರತಿನಿಧಿಸುವ ಮಣ್ಣಿನ ಗಣಪನ ಆರಾಧನೆಯ
ಕಲ್ಪನೆ ಸರ್ವಮಾನ್ಯವಾದುದು. ಗಣೇಶನ ಸಮೂಹ ಆರಾಧನೆ
ಯಿಂದ ಧಾರ್ಮಿಕ ಜಾಗೃತಿ, ಸಂಸ್ಕೃತಿಯ ಪುನರುತ್ಥಾನದ
ಜತೆಗೆ ಮಾನಸಿಕ ನೆಮ್ಮದಿಯೂ ಲಭಿಸುತ್ತದೆ.
ಪಾರ್ವತಿಯ ಮೈಯ ಬೆವರು ಕೊಳೆಯಿಂದ ರೂಪಿಸಲ್ಪಟ್ಟ,
ಮಣ್ಣಿನಿಂದಲೇ ವಿಗ್ರಹ ರೂಪದಲ್ಲಿ ಆರಾಧಿಸಲ್ಪಡುವ ಪ್ರಥಮ
ವಂದಿತನಾದ ಶ್ರೀ ಗಣೇಶನ ಸ್ವರೂಪದಲ್ಲಿ ಮಣ್ಣು ಮತ್ತು
ಬೆವರಿನ ಮಹತ್ತ್ವವನ್ನು ಕಾಣಬಹುದು. ಶ್ರೀ ಗಣೇಶೋತ್ಸವ
ನಿಜಕ್ಕೂ ಶ್ರಮಿಕ ವರ್ಗದ ಸಂತೃಪ್ತಿಯ ಹಬ್ಬ.
ಆಧುನಿಕ ಕಲಾವಿದರು ಗಣಪನನ್ನು ಸಹಸ್ರ ವಿಧಗಳಲ್ಲಿ ಹಾಗೂ
ವಿವಿಧ ಮಾಧ್ಯಮಗಳಲ್ಲಿ ಕೃತಿಗಿಳಿಸಿದ್ದಾರೆ.
ಬೆಳ್ಳಿ ಬೆಟ್ಟದೆತ್ತರದಲ್ಲಿ ಅಪ್ಪ-ಅಮ್ಮ ನಿಂತಿದ್ದಾರೆ.
ಬೆಳ್ಳಿ ಬೆಟ್ಟದ ಕೆಳಗೆ ನೆಲ-ಮುಗಿಲ ನಡುವೆ ಗಣಪನ ನಂಟು.
ಪಂಚ ಭೂತ ಗಣಗಳ ಇತಿ -ಗತಿ -ಸ್ಮೃತಿಗಳ ಒಡೆಯ ಗಣಪ.
ಮಣ್ಣ ಒಡಲಲ್ಲಿ ನೆಟ್ಟಗೆ ಬೆಳೆದ ಗಟ್ಟಿ ಮೈಯ ಕಬ್ಬು ಇವನಿಗೆ ಪ್ರಿಯ.
ಬಾಲ ಗಂಗಾಧರ ತಿಲಕರು ದೇಶವನ್ನು ಒಗ್ಗೂಡಿಸುವ ಸಾಧನವಾಗಿ
ಗಣೇಶ ಚತುರ್ಥಿಯನ್ನು ಮಹಾರಾಷ್ಟ್ರದಲ್ಲಿ ರೂಪಿಸಿದರು.
ಗಣಪತಿ ಬಪ್ಪಾ ಮೋರ್ಯಾ ।ಮಂಗಲ ಮೂರ್ತಿ ಮೋರ್ಯಾ ।
ಪುಡ್ಚ್ಯಾ ವರ್ಷಿ ಲೌಕರಿಯಾ (ಮುಂದಿನ ವರ್ಷ ಮರಳಿ ಬಾ ತಂದೆಯೇ.)
ಮೂಲ :ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s