Uncategorized

ಭಗವದ್ಗೀತೆ.

ಭಾರತ ದೇಶವನ್ನು ಪ್ರಪಂಚದ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಉತ್ಕೃಷ್ಟ ಗ್ರಂಥಗಳಲ್ಲಿ ಭಗವದ್ಗೀತೆಯೂ ಒಂದು. ಮಾನವನ ಉನ್ನತ ಜೀವನಕ್ಕೆ ಕಳಶಪ್ರಾಯವಾಗಿ ಕರ್ತವ್ಯ ಪ್ರಜ್ಞೆ ಯನ್ನು ಬೋಧಿಸಿದ ಕೀರ್ತಿ ಭಗವದ್ಗೀತೆಯದ್ದು. ತ್ಯಾಗ,ಜ್ಞಾನ ಸಂಪತ್ತು ಮತ್ತು ಕರ್ತವ್ಯ ಪ್ರಜ್ಞೆ ಜಾಗೃತಿಯನ್ನು ಬಿಂಬಿಸಿದ ಸರ್ವಕಾಲಿಕ ಶ್ರೇಷ್ಠ ರತ್ನವೆಂದು ಭಗವದ್ಗೀತೆ ಸಾರಲ್ಪಟ್ಟಿದೆ.೫ ನೇ ವೇದ ವೆಂದು ಪ್ರಸಿದ್ಧ ವಾಗಿರುವ ಮಹಾಭಾರತದ ಭೀಷ್ಮ ಪರ್ವದ ೨೫ ರಿಂದ ೪೨ನೆಯ ಅಧ್ಯಾಯದ ವರೆಗಿನ ಭಾಗಗಳನ್ನೇ ಭಗವದ್ಗೀತೆ ಎಂದು ಕರೆಯುತ್ತಿರುವುದು . ಮಹಾಭಾರತವು ೧೮ ಪರ್ವಗಳಲ್ಲಿ ೧ ಲಕ್ಷಕ್ಕೂ… Continue reading ಭಗವದ್ಗೀತೆ.

Uncategorized

ಕನ್ನಡ ಸೌರಭ.

೧. ತುಡುಕಿದ ದೋಷಿಯನಲ್ಲದೆ ಪಿಡಿಯದು ಘಟಸರ್ಪಂ ತುಡುಕದ ನಿರ್ದೋಷಿಯಮುಂ ಪಿಡಿವುದು ಖಲಮುಖ ಘಟೋಗ್ರ ಜಿಹ್ವಾ ಸರ್ಪಂ.(ಕೆಣಕಿದ ದೋಷಿಯನಲ್ಲದೆ ಅನ್ಯರನು ಪಿಡಿಯದು ಘಟ ಸರ್ಪ ;ಕೆಣಕದಿದ್ದರೂ ಕಚ್ಚುವುದು ನಾಲಗೆ ಎಂಬ ಉಗ್ರ ಘಟ ಸರ್ಪ ) ೨. ಸಂಪತ್ತು ಮತ್ತು ವಿಪತ್ತು ಮಹಾತ್ಮರಿಗೇ ಬರುವವು. ವೃದ್ಧಿಯೂ ಹ್ರಾಸವೂ ಚಂದ್ರನಿಗೇ ಇರುವವಲ್ಲದೆ ಆಕಾಶದ ಚುಕ್ಕಿ ಗಳಿಗುಂಟೇ ? ೩. ದುಡ್ಡು ಗಳಿಸುವ ಶಕ್ತಿಯಿರುವ ವರೆಗೆ ಮಾತ್ರ ಬಂಧು ಬಾಂಧವರ ಆಸಕ್ತಿ. ೪. ಚಿಂತೆಯ ಬಲೆಯನ್ನು ಹರಿಯಲು ಒಂದು ಉಪಾಯ ವೆಂದರೆ… Continue reading ಕನ್ನಡ ಸೌರಭ.

Uncategorized

ತುಳು ಗಾದೆಲು.

೧. ಅಮ್ಮೆ ಆಸ್ತಿ ಮಲ್ತೆ ;ಮಗೆಲಾ ಮಲ್ತೆ ಸಾಲ. ೨.ಅಂಗಾಯಿ ಬಾಯಿಗೇ ಕಿಲೆಂಜಿ ಬೂರುನಿ . ೩. ಆನೆಗ್ ಚಡ್ಡಿ ಪೊಲ್ಲಾಯಿ ಲೆಕ್ಕ. ೪. ಆನೆಗ್ ಉಮಿಲ್ ತುಚ್ಚಿ ಲೆಕ್ಕ. ೫. ಆಸೆದ ಅಮ್ಮಗ್ ಮೋಸದ ಮಗೆ. ೬. ಆಪತ್ತ್ ಬನ್ನಗ ಪರಕೆ;ಸಂಪತ್ತ್ ಬನ್ನಗ ಗೊರಕೆ. ೭. ಆಟ ದಾಯನ್ ಮದ್ಮೆ ಆದ್ ರಾತ್ರಿ ಇಡೀ ಕಾತಲ್. ೮. ಇಲ್ಲ್ ಗ್ ಇರ್ವೆರ್ ಗುರ್ಕಾರೆರ್ ಉಪ್ಪೆರೆ ಬಲ್ಲಿ. ೯.ಇಲ್ಲ್ ದ ಗುಟ್ಟು ,ಬಾಲೆಡ ಕೇಂಡ ತೆರಿಯು. ೧೦.… Continue reading ತುಳು ಗಾದೆಲು.

Uncategorized

ಚಿಂತನ.

೧. ಕೇಳುವವರಿದ್ದಾರೆಂದು ಬಾಯಿಗೆ ಬಂದಂತೆ ಮಾತನಾಡಬಾರದು. ಓದುವವರಿದ್ದಾರೆಂದು ಸಹನೆ ಕೆಡಿಸುವಷ್ಟು ಬರೆಯಬಾರದು. ೨. ಮರ ತನ್ನ ಬೇರುಗಳನ್ನು ಭೂಮಿಯ ಆಳಕ್ಕೆ ಇಳಿಸಿದರೆ ಮಾತ್ರ ಆಕಾಶದೆತ್ತರಕ್ಕೆಬೆಳೆಯಲು ಸಾಧ್ಯ. ಅದೇ ರೀತಿ ನಾವು ಜೀವನದಲ್ಲಿ ಸರಳತೆ, ವಿಧೇಯತೆ ಯನ್ನು ಮೈಗೂಡಿಸಿ ಕೊಂಡರೆ ಉನ್ನತ ಸ್ಥಾನಕ್ಕೇರ ಬಹುದು. ೩. ವಾದಕ್ಕೂ ವಿವಾದಕ್ಕೂ ಇರುವ ವ್ಯತ್ಯಾಸ -ವಾದದಲ್ಲಿ ಯಾರು ಸರಿ ಅನ್ನೋದು,ವಿವಾದದಲ್ಲಿ ಯಾವುದು ಸರಿ ಅನ್ನೋದು ಕೊನೆಗೂ ಗೊತ್ತಾಗುವುದಿಲ್ಲ. ೪. ಸಾವಿರ ಮೈಲುಗಳ ಅಂತರವನ್ನು ವಿಮಾನದಲ್ಲಿ ಹಾರಿ ತಲುಪಬಹುದು.ಆದರೆ ಮುನಿಸಿ ಕೊಂಡ ಮನಸ್ಸು… Continue reading ಚಿಂತನ.

Uncategorized

ಒಗಟು.

೧. ಹಿಡಿಯೋಣವೆಂದರೆ ಕೈಗೆ ಸಿಗಲಾರದು. ಬಡಿಯೋಣವೆಂದರೆ ಬಡಿಗೆಗೆ ಸಿಗಲಾರದು. ನೋಡೋಣವೆಂದರೆ ಕಣ್ಣಿಗೆ ಕಾಣಿಸಲಾರದು. ಅದಿಲ್ಲದೆ ಬದುಕೇ ಇಲ್ಲ. ಯಾವುದು ? --ಗಾಳಿ. ೨. ನನ್ನನ್ನು ಕಂಡರೆ ಒದಿಯೋರೆ ಎಲ್ಲ; ನಾನಿಲ್ಲ ದಿದ್ರೆ ಆಟವೇ ಇಲ್ಲ. --ಚೆಂಡು. ೩. ಮನೆಯ ಒಳಗೆ ಮೊಗ್ಗಾಗುವೆ; ಮನೆಯ ಹೊರಗೆ ಹೂವಾಗುವೆ. -ಛತ್ರಿ. ೪. ಗುಂಡಾಗಿದ್ದರೂ ಚೆಂಡಲ್ಲ;ಮುಚ್ಚಳ ತೆಗೆದರೆ ನೂರಾರು ಮುತ್ತು . -ದಾಳಿಂಬೆ. ೫. ಹೊಟ್ಟೆಗೆ ಕೈ ಹಾಕಿದ್ರೆ ಬಾಯಿ ಬಿಡ್ತಾನೆ. -ಬೀಗ. ೬. ಅಂಗೈ ಅಗಲದ ಕೆರೆ; ಕೆರೆಯಲ್ಲಿ ನೀರು… Continue reading ಒಗಟು.