Uncategorized

ಕನ್ನಡ ಗಾದೆಗಳು.

೧. ಉತ್ತಮ ಸಂಗಾತಿ ಇದ್ದರೆ ಯಾವ ಪಯಣವೂ
ದೀರ್ಘವೆನಿಸದು.
೨. ಅಗ್ನಿ ಇದ್ದರೆ ಯಜ್ಞಕಾರ್ಯ;ವಿಘ್ನೇಶನಿದ್ದರೆ ಶುಭ ಕಾರ್ಯ.
೩. ಕಜ್ಜಿ ಇದ್ದವನಿಗೆ ಲಜ್ಜೆ ಇಲ್ಲ.
೪. ಲಾಲಿಸಿದರೆ ಮಕ್ಕಳು; ಪೂಜಿಸಿದರೆ ದೇವರು.
೫. ಟೊಂಕ ಮುರಿದರೂ ಬಿಂಕ ಮುರಿಯಲಿಲ್ಲ.
೬. ಘಟ (ದೇಹ ) ಇದ್ದರೆ ಮಠ ಕಟ್ಟಿಸ ಬಹುದು.
೭. ಕೇಳಿದ್ದೆಲ್ಲಾ ನಂಬ ಬಾರದು;ತಿಳಿದದ್ದೆಲ್ಲಾ ಹೇಳಬಾರದು.
೮. ಎಲ್ಲಾರ್ದು ಒಂದು ದಾರಿ ಆದರೆ ಎಡವಟ್ಟನದೇ
ಒಂದು ದಾರಿ.
೯. ರಾಡಿ (ಕೆಸರು )ಯಲ್ಲಿ ಕಲ್ಲೊಗೆದು ಮೈ ಮೇಲೆ
ಸಿಡಿಸಿ ಕೊಂಡಂತೆ.
೧೦. ಆಳು ನೋಡಿದರೆ ಅಲಂಕಾರ; ಬಾಳು ನೋಡಿದರೆ
ಬಡ್ಕೊಂಡಂಗೆ.
೧೧.ಮೋರೆ ನೋಡಿ ಮಣೆ ಹಾಕು. (=ಪಕ್ಷಪಾತ ಬುದ್ಧಿ )
೧೨. ಮುಳ್ಳು ಇಲ್ಲದೆ ಗುಲಾಬಿ ಇಲ್ಲ, ನೋವು ಇಲ್ಲದೆ
ಪ್ರೀತಿ ಇಲ್ಲ.
೧೩. ದಾನ ಕೊಟ್ಟ ಎತ್ತಿನ ಹಲ್ಲು ಎಣಿಸಿದಂತೆ.
೧೪. ನೆಂಟ ನೆರವಲ್ಲ; ಕುಂಟ ಜೊತೆಯಲ್ಲ.
೧೫. ಪಂಜರದಲ್ಲಿ ಕಾಗೆಯಿಟ್ಟರೆ ಪಂಚಮ ಸ್ವರ ಕೊಟ್ಟೀತೇ ?
೧೬. ಪಕ್ಷಿಗೆ ಗೂಡು;ಮಕ್ಕಳಿಗೆ ತಾಯಿ.
೧೭. ಧನಿಕನ ಧನಿಕನ ಮನೆಯ ಶುನಕಕ್ಕೂ (ನಾಯಿ)ಗೂ
ಮನ್ನಣೆ.
೧೮. ಅಪ್ಪನ ಕಾಲಕ್ಕೆ ಅರಮನೆ; ಮಗನ ಕಾಲಕ್ಕೆ
ಬರೀ ಮನೆ.
೧೯. ಪ್ರಯಾಸ ಪಡದೆ ಪ್ರಯಾಗ ಸಿಕ್ಕದು.
೨೦. ಆಳ ನೋಡಿ ಬಾವಿಗೆ ಇಳಿಯ ಬೇಕು; ಕುಲ ನೋಡಿ
ಹೆಣ್ಣು ಕೊಡ ಬೇಕು.
ಮೂಲ:ಸಂಗ್ರಹ .

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s