Uncategorized

ಕನ್ನಡ ಸೌರಭ.

೧. ಯಾವುದೇ ವಿಷಯದ ಮಂಥನಕ್ಕೆ ಹೊರಟಾಗ ಮೊದಲು ಉಕ್ಕುವುದು ಪ್ರಶ್ನೆಗಳ ಹಾಲಾಹಲ. ನಂತರ ಹೊಮ್ಮುವುದು ಉತ್ತರದ ಅಮೃತ. ೨. ಕಡಲಿಗೇಕೆ ಸುರಿಯುವೆ ಮಳೆಯೇ ... ನೀನು ಕೂಡ ಉಳ್ಳವರ ಪರವೇ . ೩. ನಾವು ನೆರಳಿಲ್ಲದ ಮನುಷ್ಯರಾಗ ಬಾರದು. ಆದರೆ ನಮ್ಮ ನೆರಳೇ ನಮ್ಮನ್ನು ನುಂಗ ಬಾರದು. ೪. ಬಡವರ ಮಕ್ಕಳು ಮೂಟೆ ಹೊರುತ್ತಾರೆ--ಕೂಲಿಗೆ. ಶ್ರೀಮಂತರ ಮಕ್ಕಳೂ ಮೂಟೆ ಹೊರುತ್ತಾರೆ --ಸ್ಕೂಲಿಗೆ. ೫. ಒಂದು ಒಂದು ಸೇರಿದರೆ ಎರಡು -ಗಣಿತದ ಲೆಕ್ಕ ; ಒಂದು ಒಂದು ಸೇರಿದರೆ… Continue reading ಕನ್ನಡ ಸೌರಭ.

Uncategorized

ಚಿಂತನ.

೧. ಅವಜ್ಞೆಯಿಂದ ಉಪೇಕ್ಷಿತವಾದ ಪ್ರೇಮ ಮತ್ತೆ ಕೂಡುವುದು ಕಷ್ಟ. ಒಡೆದ ಮಣಿಯನ್ನು ಅರಗಿನಿಂದ ಕೂಡಿಸಲು ಸಾಧ್ಯವೇ ? ೨. ಮೃದು ಸ್ವಭಾವದವನು ಯಾವಾಗಲೂ ಅಪಮಾನಕ್ಕೆ ಒಳ ಗಾಗುತ್ತಾನೆ. ಕಠಿಣ ಸ್ವಭಾವದವನಾಗಿದ್ದರೆ ಹಗೆತನಕ್ಕೆ ಗುರಿ ಯಾಗುತ್ತಾನೆ. ಆದುದರಿಂದ ಇವೆರಡನ್ನೂ ಬಿಟ್ಟು ಮಧ್ಯಮ ರೀತಿಯಲ್ಲಿ ವರ್ತಿಸುವುದು ಉತ್ತಮ. ೩. ತಾವರೆಗಳಿಗೆ ಸೂರ್ಯನಲ್ಲಿ ಪ್ರೀತಿ. ಚಂದ್ರನ ಕಿರಣಗಳು ಎಷ್ಟು ತಂಪಾಗಿದ್ದರೂ ಅರಳುವುದಿಲ್ಲ. ೪. ದೇಹವನ್ನು ನಂಬ ಬಾರದು. ದೇವರನ್ನು ಮರೆಯ ಬಾರದು. ೫. ಬಂಧು ಮಿತ್ರರು ಮಸಣದ ವರೆಗೆ ಮಾತ್ರ ಜೊತೆಗೆ… Continue reading ಚಿಂತನ.

Uncategorized

ಚಿಂತನ.

೧. ತಪ್ಪು ಹಾದಿಯಲ್ಲಿ ಎಷ್ಟೇ ವೇಗವಾಗಿ ಧಾವಿಸಿದರೂ ಅದು ನಿಷ್ಪ್ರಯೋಜಕ. ಹಾಗಾಗಿ ಆಯ್ದು ಕೊಂಡ ದಾರಿ ಸರಿಯಾದದ್ದೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ೨. ಸಿಗದವರನ್ನು ಹುಡುಕ ಬೇಡ. ಬಾರದವರನ್ನು ಕಾಯಬೇಡ. ಕೊಡದವರನ್ನು ಕೇಳ ಬೇಡ.ಕೊಟ್ಟವರನ್ನು ಮರೆಯ ಬೇಡ. ೩. ಒಂದು ಜೇಡ ದಿನಕ್ಕೆ ೮೦ ಕೀಟ ಅಥವಾ ಸೊಳ್ಳೆಗಳನ್ನು ಪುಕ್ಕಟೆಯಾಗಿ ತಿಂದು ಸೊಳ್ಳೆ ನಾಶಕದ ಖರ್ಚನ್ನು ಉಳಿಸುತ್ತದೆ. ಆದರೆ ನಾವು ಜೇಡರ ಬಲೆಗಳನ್ನು ಕಂಡಲ್ಲಿ ಅದನ್ನು ಗುಡಿಸಿ ಶುಚಿ ಮಾಡುತ್ತೇವೆ. ೪. ಹೊನ್ನಿಗೆ ಆಸೆ ಪಡುವವರು ಸಂತರಲ್ಲ.… Continue reading ಚಿಂತನ.

Uncategorized

ಶಿವನೆಲ್ಲಿ?

ಭೋಜರಾಜನ ರಾಜ್ಯದಲ್ಲಿ ಉದ್ದಾಮ ಪಂಡಿತನೊಬ್ಬನಿದ್ದ. ಬಡತನದ ಬೇಗೆಯನ್ನು ತಾಳಲಾರದೆ ಒಂದು ದಿನ ರಾಜ ದರ್ಶನಕ್ಕಾಗಿ ಬಂದ. ಭೋಜರಾಜನು ಶಿವಾಲಯವೊಂದರಲ್ಲಿ ಪೂಜೆ ಸಲ್ಲಿಸುತ್ತಿದ್ದ. ಶಿವನಿಗೆ ಮಂಗಳಾರತಿ ಆದಮೇಲೆ ಬ್ರಾಹ್ಮಣನು ''ಭಗವಾನ್ ಶಿವನು ಅಲ್ಲಿಲ್ಲ'' ಎಂದು ಗಟ್ಟಿಯಾಗಿ ಕೂಗಿದ ರಾಜನಿಗೆ ಕೇಳುವಂತೆ. ಆಶ್ಚರ್ಯಗೊಂಡ ರಾಜ ಕೂಗಿದುದು ಯಾರೆಂದು ಕೇಳಲು ಬ್ರಾಹ್ಮಣನು ಮುಂದೆ ಬಂದ. ''ಪೂಜ್ಯರೆ,ತಾವು ಹಾಗನ್ನಲು ಕಾರಣವೇನು?'' ಎಂದು ಅರಸನು ಬೆಸಗೊಳ್ಳಲು ಬ್ರಾಹ್ಮಣನಿಂತೆಂದ:''ಪ್ರಭೂ ಬಹು ಹಿಂದೆ ಶಿವನು ತನ್ನರ್ಧ ಭಾಗವನ್ನು ವಿಷ್ಣುವಿಗೂ (ಶಂಕರ ನಾರಾಯಣ ) ಉಳಿದರ್ಧ ಭಾಗವನ್ನುಪಾರ್ವತಿಗೂ (ಅರ್ಧ… Continue reading ಶಿವನೆಲ್ಲಿ?

Uncategorized

ಕನ್ನಡದ ಮೊದಲುಗಳು.

೧. ಕನ್ನಡದ ಮೊದಲ ಕೃತಿ -ಕವಿರಾಜ ಮಾರ್ಗ(ಕ್ರಿ. ಶ. ೮೫೦). ೨. ತ್ರಿಪದಿ ಛಂದಸ್ಸಿನಲ್ಲಿರುವ ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ (ಕ್ರಿ.ಶ.೭೦೦). ೩. ಕನ್ನಡದ ಮೊದಲ ಕವಯಿತ್ರಿ --ಅಕ್ಕ ಮಹಾದೇವಿ. ೪. ಕನ್ನಡದ ಮೊದಲ ಮಹಮ್ಮದೀಯ ಕವಿ--ಶಿಶುನಾಳ ಶರೀಫರು.(೧೮೧೯) ೫. ಕನ್ನಡ ಅಕ್ಷರಗಳ ಅಚ್ಚಿನ ಮೊಳೆಗಳ ಮೊದಲ ವಿನ್ಯಾಸಕಾರ ಕನ್ನಡಿಗ --ಅತ್ತಾವರ ಅನಂತಾಚಾರಿ. (೧೮೯೦) ೬. ಬೈಬಲ್ ಅನ್ನು ಕನ್ನಡಕ್ಕೆ ಮೊದಲು ತಂದವರು --ಜಾನ್ ಹ್ಯಾಂಡ್ಸ್. ೭. ಕನ್ನಡದ ಕೆಲಸಕ್ಕೆ ಡಾಕ್ಟರೇಟ್ ಪದವಿ ಗಳಿಸಿದ ಮೊದಲಿಗ --… Continue reading ಕನ್ನಡದ ಮೊದಲುಗಳು.

Uncategorized

ಕನ್ನಡದ ಮೊದಲುಗಳು.

೧. ಕನ್ನಡದ ಪ್ರಾಚೀನತೆ -೧ನೇ ಶತಮಾನದ ಗ್ರೀಕ್ ಪ್ರಹಸನ ಗಳಲ್ಲಿ ಕನ್ನಡ ನುಡಿಯ ಬಳಕೆ -''ದೀನ ಮತ್ತು ದಮ್ಮಾರ ''ಪದಗಳು . (ಸಂಶೋಧನೆ -ಮಂಜೇಶ್ವರ ಗೋವಿಂದ ಪೈ ) ೨.ಕನ್ನಡದ ಮೊದಲ ಮಹಾಕಾವ್ಯ -ಆದಿ ಪುರಾಣ. ೨. ಆದಿ ಕವಿ- ಪಂಪ. ೩. ಕರ್ನಾಟಕದ ಮೊದಲ ವಿಶ್ವ ವಿದ್ಯಾಲಯ -ಮೈಸೂರು. ೪. ಅಚ್ಚ ಕನ್ನಡದ ಮೊದಲ ದೊರೆ -ಕದಂಬ ವಂಶದ ಮಯೂರ ವರ್ಮ. (ಕ್ರಿ. ಶ. ೩೨೫) ೫. ಕನ್ನಡದ ಮೊದಲ ನಾಟಕ -''ಮಿತ್ರವಿಂದ ಗೋವಿಂದ''. ೬.… Continue reading ಕನ್ನಡದ ಮೊದಲುಗಳು.