Uncategorized

ಕನ್ನಡ ಸೌರಭ.

ಚಿಂತನ ಸೌರಭ. 

1)  ಮನುಷ್ಯ ಎಂದೂ ತೆರೆಯಲು ಬಾರದ ಕಿಟಿಕಿಯಂತಿರ ಬಾರದು .
ಹಾಗಿದ್ದರೆ ಪ್ರಗತಿಪರ ವಿಚಾರ ನಮ್ಮತ್ತ ಸುಳಿಯದೆ, ನಾವು
ಮುಂದುವರಿದ ಜಗತ್ತಿನಲ್ಲಿ ಹಿಂದುಳಿದು ಬಿಡುತ್ತೇವೆ. ಹಾಗೆಯೇ
ಯಾವಾಗಲೂ ತೆರೆದೇ ಇರುವ ಕಿಟಿಕಿಯಂತಿರುವುದೂ ವಿಹಿತವಲ್ಲ.
ಈ ಕಿಟಿಕಿ ಹೊರಗಿರುವ ಗಾಳಿ ಶುದ್ಧವಾಗಿದ್ದರೆ ಮಾತ್ರ ಒಳಗೆ ಬಿಡ
ಬೇಕೆಂಬ ನಿಯಮವನ್ನು ಪಾಲಿಸುವುದಿಲ್ಲ.  ಸುವಾಸನೆಯಂತೆ

ದುರ್ವಾಸನೆಯೂ ಕಿಟಿಕಿಯಿಂದ ಒಳಗೆ ಬರುತ್ತದೆ. ಸುವಾಸನೆ ಬಂದಾಗ ತೆರೆದಿಡಬಹುದಾದ
ದುರ್ವಾಸನೆ ಬಂದಾಗ ಮುಚ್ಚಿಡ ಬಹುದಾದ ಮೂರನೆಯ
ಕಿಟಿಕಿ ಯಂತಿರ ಬೇಕು. ಹಿತವಾದ ವಿಷಯಗಳ ಪ್ರವೇಶಕ್ಕೆ
ಹೃದಯವನ್ನು ತೆರೆದಿಡಬೇಕು. ಅಹಿತಕಾರಿ ವಿಷಯಗಳಿಗೆ
ಪ್ರವೇಶ ಕೊಡದೆ ಮುಚ್ಚಿಡ ಬೇಕು .

2)  ಮೇಘ ಶ್ಯಾಮಲ, ನೀಲಮೇಘ, ತಮಾಲ ಶ್ಯಾಮಲ,
ಶ್ಯಾಮ ಸುಂದರ,ನೀಲಂ ಮಹಃ,ಮರಕತಮಣಿ ವರ್ಣ
ನೀಲೋತ್ಪಲದಲ ಶ್ಯಾಮ,ಹೀಗೆ ಬಗೆಬಗೆಯಾಗಿ ಕಪ್ಪನ್ನು
ವರ್ಣಿಸಿದ್ದಾರೆ ಕವಿಗಳು. ಅದು ಮನೋಹರವಾದ ಕಪ್ಪು.
ಭಯಕಾರಿ ಕಪ್ಪಲ್ಲ. ಕಗ್ಗತ್ತಲಲ್ಲ; ಅದು ರಹಸ್ಯ. ಕಾಂತಿ
ವಿಶಿಷ್ಟವಾದ ರಹಸ್ಯ.

3)ಕಟುವಾಗಿ ಮಾತನಾಡುವುದಕ್ಕಿಂತ ಕೀಳುತನವಿಲ್ಲ.
ಸತ್ಯದ ನೆಪದಲ್ಲಿ ಕಟುವಾಗಿ ಮಾತನಾಡುವುದು
ಅಜ್ಞಾನದ ಲಕ್ಷಣ. ಸತ್ಯವೆಂಬುದು ಹೊನ್ನು. ಆದರೆ
ಶುಷ್ಕ,ಶುದ್ಧ,ಸತ್ಯವೆಂಬುದು ಗಣಿಯಿಂದ ಆಗ ತಾನೆ
ಅಗೆದು ತೆಗೆದ ಬಂಗಾರದ ಅದುರು ಇದ್ದಂತೆ.
ಅಮೂಲ್ಯವೇನೊ ನಿಜ. ಆದರೆ ಹಾಗೆಯೇ ನಿಷ್ಪ್ರಯೋಜಕ
ವಸ್ತು. ಅದುರಿಗೆ ಸಲ್ಲ ಬೇಕಾದ ಸಂಸ್ಕಾರ ಸಂದರೆ
ಮಾತ್ರ ಅದು ಹೊನ್ನು ಎನಿಸಿ ಕೊಳ್ಳುತ್ತದೆ. ಅಂತೆಯೇ
ಸತ್ಯ ವಾಕ್ಯಕ್ಕೆ ಪ್ರಿಯತೆಯ ನವುರಾದ ಸಂಸ್ಕಾರ ಸಂದರೆ
ಮಾತ್ರ ಸೊಗಸೆನಿಸುತ್ತದೆ. ಕಟೋರ  ಮಾತುಗಳು
ಉರಿಯುವ ಬೆಂಕಿಗಿಂತ ಹೆಚ್ಚು ತೀವ್ರವಾದ ದುಖ
ಉಂಟು ಮಾಡುತ್ತವೆ. ಹಾಗಾಗಿ ಮಾತಿನಲ್ಲಿ ಮಧುರತೆ
ಇರಲಿ. ನಾಲಗೆ ಚೂಪು ಚೂರಿಯಿದ್ದಂತೆ. ಅದು ಹನಿ ರಕ್ತವನ್ನೂ
ಹರಿಸದೆ ವ್ಯಕ್ತಿಯನ್ನು ಸಾಯಿಸ ಬಲ್ಲುದು.

ವಚನಗಳು.
 1)  ಕರಿ ಘನ ಅಂಕುಶ ಕಿರಿದೆನ್ನ ಬಹುದೇ ?ಬಾರದಯ್ಯಾ
ಗಿರಿ ಘನ ವಜ್ರ ಕಿರಿದೆನ್ನಬಹುದೆ ?ಬಾರದಯ್ಯಾ
ತಮದ ಅಂಧಕಾರ ಘನ ಜ್ಯೋತಿ ಕಿರಿದೆನ್ನ ಬಹುದೇ ?ಬಾರದಯ್ಯಾ
ಮರಹು ಘನ   ನಿಮ್ಮ ನೆನೆವ ಮನ ಕಿರಿದೆನ್ನ ಬಹುದೇ ?ಬಾರದಯ್ಯಾ
ಕೂಡಲ ಸಂಗಮ ದೇವಾ ।
2)ಊರ ಸೀರೆಗೆ ಅಗಸ ತಡ ಬಡ ಗೊಂಬಂತೆ
ಹೊನ್ನೆನ್ನದು, ಹೆಣ್ಣೆನ್ನದು,ಮಣ್ಣೆನ್ನದೆಂದು ಮರುಳಾದೆ
ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆ ಕೂಡಲ ಸಂಗಮ ದೇವಾ ।
3)ತುಪ್ಪದ  ಸವಿಗ  ಅಲಗ ನೆಕ್ಕುವ ಸೊಣಗ (ನಾಯಿ )ನಂತೆ
ಎನ್ನ ಬಾಳುವೆ ತಂದೆ । ಸಂಸಾರ ಸಂಗವ ಬಿಡದು ನೋಡೆನ್ನ ಮನವು ।
ಈ ನಾಯಿತನವ ಮಾಣಿಸು ಕೂಡಲ ಸಂಗಮ ದೇವಾ ।
4)ಎನ್ನ ವಾಮ ಕ್ಷೇಮ ನಿಮ್ಮದಯ್ಯಾ । ಎನ್ನ ಹಾನಿ-ವೃದ್ಧಿ ನಿಮ್ಮದಯ್ಯಾ ।
ಎನ್ನ ಮಾನಾಪಮಾನ ನಿಮ್ಮದಯ್ಯಾ । ಬಳ್ಳಿಗೆ ಕಾಯಿ ದಿಮ್ಮಿತ್ತೆ
ಕೂಡಲ ಸಂಗಮ ದೇವಾ ।
ಮೂಲ :ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s