Uncategorized

ಶ್ರೀ ಗಣೇಶ.

ಜನಗಣಗಳ,ದೇವಗಣಗಳ,ಭಕ್ತಗಣಗಳ ಪತಿ ಅವನು. ಗಣತಂತ್ರದ ದೇವರವನು.  ಆದುದರಿಂದಲೇ ಜನ ಸಂಘಟನೆಗೆ  ಉಪಾಧಿಯಾಗಿ ಗಣೇಶನನ್ನು ಆರಿಸಿದ್ದು ಲೋಕಮಾನ್ಯ ತಿಲಕರು. ಚೌತಿಯ ಸಂದರ್ಭ ಜನರು ಭೇದವಿಲ್ಲದೆ ಪಾಲ್ಗೊಳ್ಳುವ ಸಾಮೂಹಿಕ ಹಬ್ಬ. ಧಾರ್ಮಿಕ ಸರಳತೆ,ಜನಪರ ಧಾರ್ಮಿಕತೆಗೆ ಉದಾಹರಣೆ ಎಂದರೆ ತೆರೆದ ಬಯಲಲ್ಲಿ ಸಾಮೂಹಿಕ ಆರಾಧನೆ. ಆತನದು ಗಜಮುಖ, ನರದೇಹ; ಆತ ವಕ್ರದಂತ, ಲಂಬೋದರ, ಸರ್ಪಭೂಷಣ,ಮೂಷಿಕ ವಾಹನ,ಮೋದಕ ಹಸ್ತ,ವಿಘ್ನರಾಜ, ವಿನೋದ ಪ್ರಿಯ. ಗಣೇಶ ನಾದದ, ನೃತ್ಯದ,ಸಾಹಿತ್ಯದ, ರಂಗ ಭೂಮಿ, ಚಿತ್ರ ಕಲೆಯ ಅಧಿದೇವತೆ. ಆತ ಆದಿ ಪೂಜ್ಯ. ''ಗಜಮುಖನ ಆದಿಯಲಿ ಅರ್ಚಿಸಿ ಕಾರ್ಯಾರಂಭಿಸಲು… Continue reading ಶ್ರೀ ಗಣೇಶ.

Uncategorized

ರಾಧೆಯ ಪ್ರೀತಿ.

ರಾಧೆ:ಸ್ವಾಮೀ ನಾನು ನಿನ್ನನ್ನು ಉತ್ಕಟವಾಗಿ ಪ್ರೀತಿಸುತ್ತೇನೆ. ಆದರೂ ಭಾವನೆಗಳೇ ಇಲ್ಲದ ಬಿದಿರನ್ನು ಸದಾ ನಿನ್ನೊಂದಿಗೆ ಒಯ್ಯುವೆ.  ನಿನ್ನ ಚೆಂದುಟಿಗಾನಿಸಿ  ಮಧುರ ನಾದವನ್ನು ಹೊಮ್ಮಿಸುವೆ.ಏಕೆ ಕೃಷ್ಣ? ನಾನು ಆ  ಬಿದಿರಿನ ಕೊಳಲಿಗಿಂತಲೂ ಕೀಳಾದೆನೆ? ಕೃಷ್ಣ: ಹೌದು, ರಾಧೆ. ನಿನ್ನ ಪ್ರೀತಿಯಲ್ಲಿ ''ನಾನು'' ಎಂಬ ಅಹಂಭಾವ ತುಂಬಿದೆ. ಬಿದಿರ ಕೊಳಲು ಒಳಗೆ ಖಾಲಿಯಿದೆ. ಅಹಂಭಾವದಿಂದ ಮಾಡುವ ಕರ್ಮ ಯಾವುದೂ ನನಗೆ ಪ್ರಿಯವಾಗುವುದಿಲ್ಲ. ಒಮ್ಮೆ ಶ್ರೀ ಕೃಷ್ಣ ಗೋಕುಲವನ್ನು ತೊರೆದು ದ್ವಾರಕೆಗೆ ಹೊರಟು ನಿಲ್ಲುತ್ತಾನೆ.ಗೋಪಿಕಾ ಸ್ತ್ರೀಯರೆಲ್ಲರೂ ಶ್ರೀ ಕೃಷ್ಣನನ್ನು ಅಗಲಿರಲಾರದೆ ಪಾದದ… Continue reading ರಾಧೆಯ ಪ್ರೀತಿ.

Uncategorized

ಕನ್ನಡ ಸೌರಭ.

ಅಧ್ಯಾತ್ಮ ಸೌರಭ. ಮಾನವ ಜೀವನವೊಂದು ಹೂವಿನ ಹಾರ. ಒಂದು ತುದಿಯಲ್ಲಿ ಜನನ; ಇನ್ನೊಂದು ತುದಿಯಲ್ಲಿ ಮರಣ. ನಡುವೆ  ನಾನಾ ರೀತಿಯ ನೋವು ನಲಿವು ಗಳೆಂಬ ಬಣ್ಣದ ಹೂವುಗಳು. ಇವುಗಳಿಗೆ ಆಧಾರವಾಗಿ ಒಳಗಡೆ ದಾರ ವೊಂದಿದೆ. ಅದೇ ಅಗೋಚರವಾದ ಬ್ರಹ್ಮ ಸೂತ್ರ. ಇದೇ ದೇವರು. ೨. ತತ್ತ್ವಮಸಿ ,ಅಯಮಾತ್ಮ ಬ್ರಹ್ಮ ,ಅಹಂ ಬ್ರಹ್ಮಾಸ್ಮಿ , ಪ್ರಜ್ನಾನಂ ಬ್ರಹ್ಮ ಎಂಬ ನಾಲ್ಕು ಮಹಾ ವಾಕ್ಯಗಳಲ್ಲಿ ವೇದಗಳು ಪರಮಾತ್ಮನ ಇರುವಿಕೆಯನ್ನು ಸಾರಿವೆ. ೩. ''ಚಂದ್ರಮಾ ಮನಸೋಜಾತಃ '' ನಮ್ಮ ಮನಸೇ ಚಂದ್ರ.… Continue reading ಕನ್ನಡ ಸೌರಭ.

Uncategorized

Spiritual Corner.

Uncertainty. The world is of change.Self is of no change. You have to rely on no-change (Self) and accept the change.(World) If you are certain that everything is uncertain, then, you are liberated. Uncertainty about matter, brings certainty about the conciousness. Certainty about the relative world, creates dullness. uncertainty about the Self,  creates fear. Acting… Continue reading Spiritual Corner.

Uncategorized

ಶ್ರೀ ಲಕ್ಷ್ಮಿ.

''ಲಕ್ಷಯತಿ-ಪಶ್ಯತಿ ಭಕ್ತ ಜನಾನ್ ಇತಿ ಲಕ್ಷ್ಮೀ'' ಇದು ಲಕ್ಷ್ಮೀ ಶಬ್ದದ ವ್ಯುತ್ಪತ್ತಿ. ಉಪಾಸಕರನ್ನು ಕೃಪಾ ಕಟಾಕ್ಷದಿಂದ ವೀಕ್ಷಿಸುವವಳೇ ಲಕ್ಷ್ಮೀ. ಶ್ರೀ ಎಂಬುದು ಲಕ್ಷ್ಮಿಯ ನಾಮಾಂತರ. ಪ್ರಭೆ,ಶೋಭೆ,ಕೀರ್ತಿ, ಕಾಂತಿ,ವಿಭೂತಿ, ಮತಿ,ವರ್ಚಸ್,ತೇಜಸ್,ಸೌಂದರ್ಯ,ವೃದ್ಧಿ, ಸಿದ್ಧಿ,ಸೌಭಾಗ್ಯ,ಕಮಲ,ಬಿಲ್ವ ವೃಕ್ಷ ಮುಂತಾದುವು ''ಶ್ರೀ ''ಶಬ್ದ ಕ್ಕಿರುವ ಅರ್ಥಗಳು. ಸಂಪತ್ತೆಂಬುದು ಸಾಮಾನ್ಯ ಅರ್ಥವಾದರೂ ಐಶ್ವರ್ಯವೆಂಬುದು  ಪ್ರಧಾನ ಅರ್ಥ. ''ಈಶ್ವರಸ್ಯಭಾವಃ ಐಶ್ವರ್ಯಂ''  ಪರಮಾತ್ಮನ ಅನುಗ್ರಹಕಾರಕ ವಾದ ಗುಣ ವಿಶೇಷವೇ ''ಶ್ರೀ''(ಬಂಗಾರ ಮತ್ತು ಸಂಪತ್ತು ಆಕೆಯ ಅನುಗ್ರಹವೆಂಬುದು ಗ್ರಾಹ್ಯ ) ಶ್ರೀ ಸೂಕ್ತದ ಆಶಯ-''ಹಿರಣ್ಯ-ಮಹಾಲಕ್ಷ್ಮಿ'' (ಹಿರಣ್ಯ ಸ್ವರೂಪಳಾದ ಶ್ರೀ ಮಹಾಲಕ್ಷ್ಮಿಯು… Continue reading ಶ್ರೀ ಲಕ್ಷ್ಮಿ.