Uncategorized

ಕನ್ನಡ ಸೌರಭ .

ಚಿಂತನ .

೧)ಒಂದು ಬಟ್ಟಲು ನೀರಿನಲ್ಲಿ ಒಂದು ಹಿಡಿ ಉಪ್ಪು ಹಾಕಿದರೆ

ಸೇವಿಸಲು ಸಾಧ್ಯವಾಗದು . ಅದೇ ಒಂದು ಹಿಡಿ ಉಪ್ಪನ್ನು

ನದಿಗೆ ಹಾಕಿದರೆ ಅದನ್ನು ವಿಶಾಲವಾದ ನದಿ ಜೀರ್ಣಿಸಿ

ಕೊಳ್ಳುತ್ತದೆ . ಆ ನೀರು ಸೇವಿಸಲು ಸಾಧ್ಯ. ಹಾಗೇ ಹೃದಯ

ಸಣ್ಣ ಬಟ್ಟಲಿನಂತಿದ್ದರೆ, ಟೀಕೆ,ಸಂಕಷ್ಟ ಗಳು ಅಪಾರ ಚಿಂತೆ,

ದುಃಖ ಉಂಟು ಮಾಡುತ್ತವೆ. ಪ್ರೀತಿ,ಕರುಣೆಗಳಿಂದ ಎದೆಯನ್ನು

ಹಿಗ್ಗಿಸಿಕೊಂಡು, ನದಿಯಂತೆ ವಿಶಾಲವಾಗಿಸಿದರೆ ಕಟು ಟೀಕೆಗಳನ್ನು,

ಸಂಕಷ್ಟಗಳನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ಪಡೆಯುತ್ತದೆ.

-ಮೊಳಕಾಲ್ಮೂರು ಶ್ರೀನಿವಾಸ ಮೂರ್ತಿ .

೨)”ಸಮಾನಶೀಲ ವ್ಯಸನೇಷು ಸಖ್ಯಂ ”

(=ಸ್ವಭಾವ,ನಡತೆ ಮತ್ತು ಅಭಿರುಚಿಯು ಸಮಾನವಾಗಿದ್ದವರಲ್ಲಿ

ಮಾತ್ರ ಮೈತ್ರಿ ಮತ್ತು ವಿವಾಹ ಸಂಬಂಧವು ಸ್ಥಿರವಾಗಿರುತ್ತದೆ .)

೩)ಶುದ್ಧ ಸಂಗೀತಕ್ಕೆ ಭಯೋತ್ಪಾದಕ ಮನಸ್ಸನ್ನೂ

ಬದಲಿಸುವ ಶಕ್ತಿ ಇದೆ. ಭಾರತೀಯ ಸಂಗೀತದಲ್ಲಿ

ಆಧ್ಯಾತ್ಮಿಕತೆ ಇದೆ. ಹಿಂದಿನ ಸಂಗೀತ ರಾಗಾಧಾರಿತ

ವಾಗಿರುತ್ತಿತ್ತು . ಇಂದು ರೋಗಗ್ರಸ್ತ ವಾಗಿದೆ. ಮೊದಲಿನ

ಸಂಗೀತದಲ್ಲಿ ಹಿತವಿತ್ತು. ಈಗಿನ ಸಂಗೀತದ ಕೆಟ್ಟ ಸಾಹಿತ್ಯ

ದಿಂದ ಮಾನಸಿಕ ವಿಕೃತಿ ಹೆಚ್ಚುತ್ತಿದೆ. ಸಂಗೀತಕ್ಕೆ

ಮೈ ಮರೆಸುವ ಗುಣ ಇದೆ . ಅದಕ್ಕೆ ಮನಸೋತರೆ

ದೇವರನ್ನು ಪೂಜಿಸುವುದನ್ನೂ ಮರೆಯಬಹುದೆಂಬ

ಕಾರಣಕ್ಕೆ ಇಸ್ಲಾಂ ಧರ್ಮದಲ್ಲಿ ಸಂಗೀತಕ್ಕೆ ಪ್ರಾಧಾನ್ಯತೆ ಇಲ್ಲ.

-ಫಯಾಜ್ ಖಾನ್ -ಗಾಯಕ,ಸಾರಂಗಿ,ತಬಲಾ ವಾದಕ .

ಕಾಲ ಗಣನೆ .

ಕ್ರಿಸ್ತ ಹುಟ್ಟಿದಂದಿನಿಂದ ಶಿಲುಬೆಗೇರಿಸುವ ವರೆಗಿನ ಕಾಲವನ್ನು

ಪರಿಗಣಿಸುವುದು ಸುಲಭ. ABCD. B.C. =Before Christ .

A.D. =After Death .

ಜನವರಿ 1 ರಿಂದ December ಅಂತ್ಯದವರೆಗೆ Christian

Calendar Year .

April 1 ರಿಂದ March 31ರ ವರೆಗೆ ಆರ್ಥಿಕ ವರ್ಷ .

June 1 ರಿಂದ March 31ರ ವರೆಗೆ ಶೈಕ್ಷಣಿಕ ವರ್ಷ .

ಹಿಂದುಗಳಿಗೆ ಧಾರ್ಮಿಕವಾಗಿ ಚೈತ್ರ ಪ್ರತಿಪದೆಯಿಂದ

ಫಾಲ್ಗುಣ ಅಮವಾಸ್ಯೆಯವರೆಗೆ ಚಾಂದ್ರಮಾನ ವರ್ಷ.

ಕೆಲವರಿಗೆ ವಿಷು(ಸಂಕ್ರಮಣ )ದಿಂದ ಮತ್ತೊಂದು ಸಂಕ್ರಮಣದವರೆಗೆ

ಸೌರಮಾನ ವರ್ಷ. ಮುಸಲ್ಮಾನರಿಗೆ ಧಾರ್ಮಿಕವಾಗಿ

ಹಿಜರಿ ಶಕೆ, ವ್ಯಾವಹಾರಿಕವಾಗಿ ಕ್ರಿಸ್ತ ಶಕೆ ;ಹೀಗೆ ಭಿನ್ನ

ಭಿನ್ನ ಕಾಲಗಣನೆ ಬಳಕೆಯಲ್ಲಿವೆ.

Calendar [=ಸಾರಿ ಹೇಳು (Latin )}ಪದವನ್ನು ಮೊದಲು

ಬಳಸಿದವರು ರೋಮನ್ನರು . ಯೇಸು ಕ್ರಿಸ್ತನ ಜನನಕ್ಕೆ ಹಲವು

ವರ್ಷಗಳ ಮೊದಲೇ ಈ ಪದ ಬಳಕೆಯಲ್ಲಿತ್ತು.

ಕ್ರಿ. ಪೂ. 6೦೦ ವರ್ಷಗಳ ಹಿಂದೆ ಈಜಿಪ್ತ್ ನಲ್ಲಿ ಕಾಲ ಗಣನೆ

ಆರಂಭ . ಆದರೆ ತಿಥಿ ,ವಾರ,ನಕ್ಷತ್ರ ,ಯೋಗ ,ಕರಣ ಎಂಬ

೫ ಅಂಗಗಳುಳ್ಳ ಹಿಂದೂ ಪಂಚಾಂಗದ ಪ್ರಾಚೀನತೆ ನಿರ್ಧರಿಸುವುದು

ಕಷ್ಟಕರ.

ಆರೋಗ್ಯವೇ ಭಾಗ್ಯ.

೧)ಸಂದು ನೋವಿಗೆ (Joint Pain )ರಸಬಾಳೆ

ರಾಮ ಬಾಣ .

೨)Omega -3 ಕೊಬ್ಬಿನ ಆಮ್ಲ ಕಣ್ಣಿನ ಆರ್ದ್ರತೆಯನ್ನು

ಕಾಪಾಡುತ್ತದೆ.

೩)ಬಾಲ್ಯದಲ್ಲಿ ರಕ್ತ ನಾಳಗಳಲ್ಲಿ ಹರಿಯುವ ರಕ್ತ ತೆಳುವಾಗಿದ್ದು

ತ್ವರಿತ ಗತಿಯಲ್ಲಿ ಸಾಗುತ್ತಿರುತ್ತದೆ. ವಯಸ್ಸಾದಂತೆ ರಕ್ತನಾಳ

ಗಳಲ್ಲಿ ಹರಿವ ರಕ್ತ ಮಂದವಾಗುತ್ತ ನಿಧಾನವಾಗಿ ಸಾಗುತ್ತಿರುತ್ತದೆ.

ಬೆಣ್ಣೆ ,ತುಪ್ಪ,cheese ತಿಂದರೆ ಕೊಬ್ಬು ಸೇರಿ ರಕ್ತ ಇನ್ನಷ್ಟು

ಮಂದವಾಗುತ್ತದೆ.

೪)ಬೇವು ಮಾನಸಿಕ ಒತ್ತಡ ಪರಿಹಾರಕ್ಕೆ ಪರಿಣಾಮಕಾರಿ ಔಷಧಿ.

ಬೇವು ರಕ್ತ ಶೋಧಕವೂ ಹೌದು. ಬೇವಿನ ರಸ ಸೇವನೆಯಿಂದ

ಅಧಿಕ ರಕ್ತದೊತ್ತಡ ಕಡಿಮೆಯಾಗುವುದು.ರಕ್ತದಲ್ಲಿ ಕೊಬ್ಬಿನ

ಪ್ರಮಾಣ ಮತ್ತು ಕೊಲೆಸ್ಟ್ರಾಲ್(cholesterol) ಮಟ್ಟ ಕ್ಷೀಣಿಸುವುದು.

ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s