Uncategorized

ಕನ್ನಡ ಸೌರಭ .

ಹೆಣ್ಣು.
”ಹೆಣ್ಣಿಗಿರುವುದು ಒಂದೇ ಸಾವಲ್ಲ ;ಹೆಂಗಸರ ಹೊಟ್ಟೇಲಿ

ಸುರುಳಿ ಸುತ್ತಿ ಬಿದ್ದಿರೋದು ಅಳುವೇ ವಿನಾ ಕರುಳುಗಳಲ್ಲ.

ಸತ್ತು ಬದುಕ ಬೇಕು ಮಗಳೇ … ”

ಓಲ್ಗಾ (ಕತೆಗಾರ್ತಿ );ಕೃತಿ :ಮೊದಲ ಸಾವು .

ಹಸಿಯಿದ್ದಳು ಬಿಸಿಯಾದಳು ।

ಸಸಿಯಿದ್ದಾ ಹುಡುಗಿ । ಹುಸಿಯರಿಯದ ಹುಡುಗಿ ।

ಪಾಡಾದಳು ಹಣ್ಣಾದಳು। ಮಣ್ಣಾದಳು ಹುಡುಗಿ ।

ನೆನಪಾದಳು ಕಥೆಯಾದಳು । ವ್ಯಥೆಯಾದಳು

ಎದೆಯಲ್ಲಿಯೆ ಮಡಗಿ ।

-ಅಂಬಿಕಾತನಯ ದತ್ತ .

ಬಯಲು ಸೀಮೆಯ ಹುಡುಗಿ ನಾನು ।

ಬದುಕು ಹಸನೆಂದು ತಿಳಿದವಳು ।

ತಿಳಿನೀರ ಕೆಳಗೆ ಕೆಸರಿದೆಯೆಂದು ಅರಿಯದವಳು ।

ಮಿನಿ ಕವಿತೆ .

ರಾಮ ಹುಟ್ಟಿದ । ಸೇತುವೆ ಕಟ್ಟಿದ ।

ರಾವಣನನ್ನು ಕುಟ್ಟಿದ ।

-ರಾಮಾಯಣ ಸಾರ .

ಓದಿದಾ ಓದು ತಾ ಮೇದ ಕಬ್ಬಿನ ಸಿಪ್ಪೆ ।

ಓದಿನಾ ಒಡಲನರಿತಿಹರೆ ಸಿಪ್ಪೆ ತಾ ಮತ್ತೆ ಕಬ್ಬಾದಂತೆ -ಸರ್ವಜ್ಞ .

ಪ್ರಶ್ನೆ .

ಹೆತ್ತಯ್ಯ ಅರ್ಜುನನು । ಮುತ್ತಯ್ಯ ದೇವೇಂದ್ರ ।

ಮತ್ತೆ ಸೋದರ ಮಾವ ಶ್ರೀ ಕೃಷ್ಣ ನಿರುತಿರಲು ।

ಸತ್ತ ನೇಕಯ್ಯ ಅಭಿಮನ್ಯು ?

ನುಡಿ ಮುತ್ತು .

೧ )ನಾಯಿಗೆ ವಯಸ್ಸಾದರೇನು ?ಅಜ್ಜ ಅನಿಸಿ ಕೊಳ್ಳುತ್ತದೋ ?

೨ )ಅಟ್ಟದಿಂದ ಬಿದ್ದೋರನ್ನ ದಡಿ ತಗಂಡು ಬಡದ್ರು .

೩ )ಆತ್ಮ ನಿಂದೆ ಆತ್ಮಹತ್ಯೆಗೆ ಸಮಾನವಂತೆ.

೪ )ಹೂವುಗಳನ್ನು ಮಾರಿದ ಜಾಗದಲ್ಲಿ ಕಟ್ಟಿಗೆ ಮಾರುವುದುಂಟೇ?

೫ )ಕಟ್ಟಬೇಡ ಗೆಳತಿ ಕನಸುಗಳ ಸೌಧ ;ಕುಸಿದು ಬಿದ್ದರೆ ಬದುಕು

ಬರೇ ವಿಷಾದ.

6)ಕಾಗೆ ಕಪ್ಪಾದರೆ ಕೋಗಿಲೆ ಆದೀತೆ ?

7)ಇರುವವರೆಂದು ತಿಳಿದರೆ ಬರುವವರು ಹೆಚ್ಚು.

ಕೊಡುವವರೆಂದು ಕಂಡರೆ ಕಬಳಿಸುವವರು ಹೆಚ್ಚು .

8)ಪುಷ್ಪವು ಸೀಮಿತ ;ಅದರ ಸುಗಂಧ ಸೀಮಾತೀತ .

9)ಅತಿಥಿ ಗಳೂ ಮೀನಿನ ಹಾಗೆಯೇ … ಮೂರೇ ದಿನಗಳಲ್ಲಿ

ನಾರಲು ತೊಡ ಗುತ್ತಾರೆ.-ಬೆಂಜಮಿನ್ ಫ್ರಾಂಕ್ಲಿನ್ .

ವಿವಿಧ ಹೆಸರುಗಳು :

ಸಾಗರ -ರತ್ನಾಕರ,ಅಬ್ಧಿ ,ಅಂಬುನಿಧಿ,ವಾರಿಧಿ,ವನ,

ಶರಧಿ,ಸಮುದ್ರ .

ಅಮ್ಮ-ಜನನಿ,ತಾಯಿ,ಅವ್ವ ,ಮಾತೆ,ಅಂಬೆ.

ಪತಿ-ಗಂಡ,ರಮಣ,ವಲ್ಲಭ ,ಕಾಂತ,ಈಶ ,ಒಡೆಯ ,ಸ್ವಾಮಿ ,

ಪ್ರಭು,ನಾಥ,ಧವ (”ಮಾ”ಧವ=ಲಕ್ಷ್ಮಿ ಪತಿ ),ವತ್ಸ . (ಶ್ರೀ ವತ್ಸ =ಲಕ್ಷ್ಮೀ ಕಾಂತ)

ಕಣ್ಣು-ನಯನ,ನೇತ್ರ,ಅಕ್ಷಿ ,ಲೋಚನ .

ಆನೆ-ಗಜ,ಕರಿ,ಸಲಗ, ಜಂಬೊ.

ನಕ್ಷತ್ರ -ತಾರೆ,ಉಡು(ಉಡು ಗಣ =ನಕ್ಷತ್ರ ಸಮೂಹ)

ಹಾವು -ಉರಗ,ಸರ್ಪ,ನಾಗ,ಕುಕ್ಕುಟ ಧ್ವಜ,ಅನಂತ ಪದ್ಮನಾಭ ,

ತಕ್ಷಕ,ಕ್ರೌಂಚಾರಿ,ಪನ್ನಗ, ಸುಬ್ರಹ್ಮಣ್ಯ .

ನಿಮಗೆ ಗೊತ್ತೇ ?

೧)ದೇಶದ ಒಟ್ಟು Police ಪಡೆಗಳಲ್ಲಿ ಮಹಿಳೆಯರ ಸಂಖ್ಯೆ

ಕೇವಲ ಶೇ . ೩ . ೯೮.

೨)ಅಬ್ರಹಾಂ ಬೆನ್ ಈಜೂ (ಟ್ಯುನಿಶಿಯದ ಯೆಹೂದಿ ವ್ಯಾಪಾರಿ )

ಬರೆದ ಮಹತ್ವದ ದಾಖಲೆ (೧೭ October ೧೧೩೨ ರದ್ದು )

ಪ್ರಕಾರ ಮಂಜರೂರ್ ( ಮಂಗಳೂರು ) ತುಳುವ ನಾಡಿನಲ್ಲಿತ್ತು.

ತುಳು ಭಾಷೆ ಇಲ್ಲಿ ಪ್ರಚಲಿತವಾಗಿತ್ತು.ಈತ ಭಾರತದಲ್ಲಿ ,ಈಜಿಪ್ಟ್ ನಲ್ಲಿ

ಹಾಗೂ ಏಡೆನ್ ನಲ್ಲಿ ವ್ಯಾಪಾರ ಸಂಪರ್ಕ ಹೊಂದಿದ್ದನು .

೩) ಬೆಂಗಳೂರು ಸ್ಥಾಪಕ ಕೆಂಪೇ ಗೌಡನಿಗಿಂತ ಮೊದಲು

ಹೊಯ್ಸಳರ ರಾಜ ೨ನೇ ವೀರ ಬಲ್ಲಾಳನು ಹೆಬ್ಬಾಳದ ಸಮೀಪ

ಇರುವ ಹಳೆಯ ಬೆಂಗಳೂರಿಗೆ (ಕ್ರಿ . ಶ .೯೯೦) ನಾಂದಿ ಹಾಕಿದ್ದ

ಎಂದು ಬೇಗೂರಿನ ಶಾಸನವು ತಿಳಿಸುತ್ತದೆ.

ಮೂಲ:ಸಂಗ್ರಹ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s