Uncategorized

ಪುರಾಣಗಳ ಒಳಾರ್ಥ.

ಪುರಾಣಗಳು ೩ ಭಾಷೆಯಲ್ಲಿವೆ: ೧)ದರ್ಶನ ಭಾಷೆ (ಕಂಡದ್ದನ್ನು  ಕಂಡಷ್ಟೇ ಹೇಳುವುದು). ೨)ಸಮಾಧಿ ಭಾಷೆ (ಇರುವಂಥದ್ದನ್ನು ಹೇಳುವುದು). ೩)ರಹಸ್ಯ/ನಿಗೂಢ ಭಾಷೆ (ಸಾಂಕೇತಿಕವಾಗಿ ಹೇಳುವುದು). ಪುರಾಣದ ಕಥೆಗಳು ಮೇಲ್ನೋಟಕ್ಕೆ ತೀರ ಅಸಂಗತ ವಾಗಿ, ಬಾಲಿಶವಾಗಿ ಕಾಣುವುದು ಅದರ ದರ್ಶನ ಭಾಷೆಯಿಂದಾಗಿ. ಅವುಗಳ ಒಳಾರ್ಥವನ್ನು ತಿಳಿಯಲು ಸಮಾಧಿ ಭಾಷೆಯನ್ನು ಅರಿಯಬೇಕು. ಹಾಗೆಯೇ  ಆ ಕಥೆಗಳ ಅಧ್ಯಾತ್ಮ ಮೌಲ್ಯಗಳೇನು ಎಂಬುದನ್ನು ರಹಸ್ಯ ಭಾಷೆ ವಿವರಿಸುತ್ತದೆ.ಪುರಾಣಗಳ ಸಂದೇಶ ತಲುಪುವುದು ಸಂಕೇತಾರ್ಥ ಅರಿತಾಗ ಮಾತ್ರ. ಕೇವಲ ಕತೆಗಳ ಮಟ್ಟಕ್ಕೆ ಅವುಗಳನ್ನು ಸ್ವೀಕರಿಸಲು ಮುಂದಾದರೆ ಅಲ್ಲಿನ ಅಸಾಂಗತ್ಯದಿಂದ… Continue reading ಪುರಾಣಗಳ ಒಳಾರ್ಥ.

Uncategorized

ದೀಪಾವಳಿಯ ಆಚರಣೆ ಮತ್ತು ಮಹತ್ತ್ವ.

ನಾವು ವರ್ಷಂಪ್ರತಿ ಆಚರಿಸುವ ಹಬ್ಬಗಳಲ್ಲಿ ನಾಗರ ಪಂಚಮಿ ಮೊದಲನೆಯದು. ತುಳಸಿ ಹಬ್ಬ ಕೊನೆಯದು.ದೀಪಾವಳಿ ಕೃಷಿಕರಿಗೆ ಸುಗ್ಗಿಯ ಕಾಲದಲ್ಲಿ ಬರುತ್ತದೆ.ನರಕ ಚತುರ್ದಶಿ ದಿನ ಎಳ್ಳೆಣ್ಣೆ ಹಚ್ಚಿ ಸ್ನಾನ.ಏಕೆಂದರೆ ಅಂದು ಎಣ್ಣೆಯಲ್ಲಿ ಲಕ್ಷ್ಮಿಯೂ ನೀರಿನಲ್ಲಿ ಗಂಗೆಯೂ ಸನ್ನಿಹಿತರಾಗಿರುತ್ತಾರೆ. ಆದ್ದರಿಂದ ಅಂದು ತಿಲ ತೈಲಾಭ್ಯಂಜನ/ಅಭ್ಯಂಗ ಮಾಡಿದವನು ಯಮಲೋಕವನ್ನು ಹೊಂದುವುದಿಲ್ಲ. ಚಂದ್ರೋದಯ(ಅಂದರೆ ಸುಮಾರಾಗಿ ಸೂರ್ಯೋದಯಕ್ಕೆ ಮೊದಲು)ಕಾಲ ಅಭ್ಯಂಗಾ ನಂತರ ಯಮ ತರ್ಪಣ ಕೊಡಬೇಕು(ತಂದೆ ಇರುವವರು ಕೂಡ ).ಇದರಿಂದ ವರ್ಷವಿಡೀ ಮಾಡಿದ ಪಾಪಗಳು ನಶಿಸುತ್ತವೆ. ಯಮನು ನೀತಿ-ನ್ಯಾಯಗಳ ಶಾಸಕ(ಧರ್ಮರಾಜ) ಎಂಬುದರಿಂದ ದೇವತ್ವ.ಪ್ರೇತಾಧಿಪತಿ  ಎಂಬು ದರಿಂದ … Continue reading ದೀಪಾವಳಿಯ ಆಚರಣೆ ಮತ್ತು ಮಹತ್ತ್ವ.

Uncategorized

ಬೆಳಕಿನ ರಾಜ್ಯ.

ಮಾನವನ ಮನಸ್ಸಿನಾಚೆಗೆ ವಿಜ್ಞಾನದ ರಾಜ್ಯವಿದೆ. ಶ್ರದ್ಧೆ, ಸತ್ಯ, ಋತ್,ಯೋಗ ಮತ್ತು ಮಹತ್--ಇವೇ ಆ ವಿಜ್ಞಾನದ ರಾಜ್ಯ. ಅದೇ ಬೆಳಕಿನ ರಾಜ್ಯ. ಆ ಕಡೆಗೇ ಮಾನವನ ನಿಜವಾದ ಮುನ್ನಡೆ. ಮಾನವ ವಿದ್ಯೆ ಎಂಬ ಬೆಳಕಿನತ್ತ ಹಾಯಬೇಕೆ ಹೊರತು ಅವಿದ್ಯೆ ಎಂಬ ಕಾಳ ಕತ್ತಲಿನ ಮೃತ್ಯು ಬಾಯಿಗಲ್ಲ. ''ಹೃದಯ ಹೃದಯದಿ ಅವತರಿಸು, ಅಂದು ನರಕಾಸುರರು ''ನರಸುರ''ರಾಗಿ, ನರಕವೆಂಬುದು  ಸುರಲೋಕವಾಗುವುದು'' --ಈ ಕವಿ ವಾಣಿ ಎಷ್ಟು ಸತ್ಯ! ನರಕಾಸುರ ಅಳಿದರೂ  ಅವನ ದುಷ್ಟವೃತ್ತಿ ಉಳಿದಿದೆ.ಇದು ತೊಲಗುವುದೆಂತು? ದ್ವಾಪರ ಯುಗದಲ್ಲಿ ನರಕನನ್ನು ಅಳಿಸಿ… Continue reading ಬೆಳಕಿನ ರಾಜ್ಯ.

Uncategorized

Dipavali or Festival of Lights.

Dipavali is a festival of 3 days-- 1. Dhana(wealth) Trayodashi (24th October,2011): People purchase gold on this day. The legend says that on this day, Gods and demons churned the ocean for nector and Dhanvantari (the physician of the gods and incarnation of Lord Vishnu) emerged carrying a jar of elixier. Festival of Diwali starts after Dhana… Continue reading Dipavali or Festival of Lights.

Uncategorized

ಬೆಳಕಿನ ಹಬ್ಬ.

''ತಮಸೋಮಾ ಜ್ಯೋತಿರ್ಗಮಯ''(ಕತ್ತಲು ಕಳೆದು ಬೆಳಕು ಮೂಡಲಿ) ಎಂಬ ಪ್ರಾರ್ಥನೆಯ ವಿರಾಡ್ರೂಪ--ದೀಪಾವಳಿ/ದೀಪದ ಹಬ್ಬ. ಸೃಷ್ಟಿಯ ಮೂಲ, ಬೆಳಕಿನ ಮೂಲ ಕತ್ತಲೆ. ಮಹಾಲಯ ಅಮಾವಾಸ್ಯೆ/ನವರಾತ್ರಿಯಿಂದ ಆಶ್ವಯುಜ ಅಮಾವಾಸ್ಯೆ/ದೀಪಾವಳಿ ವರೆಗೆ ಸಂಕೋಚದಿಂದ ವಿಕಾಸದತ್ತ ಪ್ರಕೃತಿಯ ಪಯಣ. ದೀಪಾವಳಿ ನಮ್ಮಿಂದ ಪ್ರಾಮಾಣಿಕ ಲೆಕ್ಕವನ್ನು ಕೇಳುತ್ತದೆ.ಪ್ರೀತಿ ಕೊಟ್ಟವರಿಗೆ ನೋವು ಕೊಟ್ಟಿದ್ದೇವೆಯೇ? ಮಾತು ನೀಡಿದವರಿಗೆ ಮೌನ ಕೊಟ್ಟಿದ್ದೇವೆಯೇ? ಹುಟ್ಟು ಕೊಟ್ಟವರಲ್ಲಿ ಸಿಟ್ಟು ಕೊಟ್ಟಿದ್ದೇವೆಯೇ? ಅದರ ಲೆಕ್ಕ ತೀರಿಸಲು ಪ್ರೀತಿಯ ಹಣತೆ ಹಚ್ಚ ಬೇಕು. ನರಕ ಚತುರ್ದಶಿ: ದುಷ್ಟ ನರಕಾಸುರ ಇಂದ್ರ ಲೋಕಕ್ಕೆ ದಾಳಿ ಮಾಡಿ ದಾಗ… Continue reading ಬೆಳಕಿನ ಹಬ್ಬ.

Uncategorized

ದೀಪ.

ಬದುಕಿಗೆ ಒಲವೆ ದೀಪ. ಬೆಳಕಿಲ್ಲದೆ ಬದುಕಿಲ್ಲ; ಜ್ಯೋತಿಯೇ ದೇವರು; ಮಕ್ಕಳ/ಎಳೆಯರ ಕಣ್ಣಲ್ಲಿ ಸಂತಸದ ದೀಪ; ಹೆಂಗಳೆಯರ ಮೊಗದಲ್ಲಿ ಕಿರುನಗೆಯ ದೀಪ; ನೀಲಾಕಾಶದಲ್ಲಿ ನಕ್ಷತ್ರಗಳ ದೀಪ; ದೇವರ ಮುಂದೆ ನಂದಾ ದೀಪ; ಮನೆ ಮನೆಗಳ ಹೊಸ್ತಿಲಲ್ಲಿ ಹಣತೆಗಳ ದೀಪ; ದೀಪ ಬೆಳಗಲಿ; ಬದುಕು ಅರಳಲಿ. ಹೆಣ್ಣನ್ನು ದೀಪಕ್ಕೆ ಹೋಲಿಸುತ್ತಾರೆ. ದೀಪಧಾರಿ ಹೆಣ್ಣು ಸಮಾಜದ ಕಣ್ಣು. ದೀಪ ಹಿಡಿದ ಗಂಡಿನ ಚಿತ್ರ ಎಲ್ಲಿಯೂ ಕಾಣ ಸಿಗದು. ದೀಪಗಳಲ್ಲಿ ತುಪ್ಪದ ದೀಪ ಶ್ರೇಷ್ಠ. ಅದು ಆನಂದ, ಜ್ಞಾನ ವರ್ಧಕ. ನೇತ್ರದ ದೋಷ… Continue reading ದೀಪ.